Wednesday, July 7, 2010

ಪ್ರೇಮಾ

ಕನ್ನಡದ ಜನಪ್ರಿಯ ನಟಿ ಹಾಗೂ ಕೊಡಗಿನ ಬೆಡಗಿ ಪ್ರೇಮಾ, ಇವಳ ತಂದೆ ಚಂಗಪ್ಪ, ತಾಯಿ ಕಾವೇರಿ. ಪ್ರೇಮಾ 2 ನೇ ವರ್ಷದ ಪಿಯುಸಿಯಲ್ಲಿ ಇರುವಾಗ ಎಮ್.ಎಸ್.ರಾಜಶೇಖರ್ ನಿರ್ದೇಶಣದ 'ಸವ್ಯಸಾಚಿ' ಪಿಲ್ಮ್ ಆಪರ್ ಬಂದಿತು. ಆವಾಗ ಅವಳ ಕೊನೆಯ ಪರೀಕ್ಷೆಯನ್ನು ಮುಗಿಸಿಕೊಂಡು ಚಿತ್ರವನ್ನು ತೆಗೆಯಲಿಕ್ಕೆ ಹೋಗಿದ್ದರು. 1995 ರಲ್ಲಿ 'ಸವ್ಯಸಾಚಿ' ಚಿತ್ರ ತೆಗೆದರು. ಈ ಚಿತ್ರದ ನಾಯಕ ಶಿವರಾಜಕುಮಾರ.

ಎರಡನೇ ಚಿತ್ರವೇ 'ಓಂ', ಇದು ತುಂಬಾನೇ ಹಿಟ್ ಆಯಿತು. ಈ ಚಿತ್ರದಲ್ಲಿ ಪ್ರೇಮಾ ನಾಯಕಿ ಪಾತ್ರ ವಹಿಸಿದರೆ, ನಾಯಕನ ಪಾತ್ರವನ್ನು ಶಿವರಾಜಕುಮಾರ ವಹಿಸಿದರು. 1998 ರಲ್ಲಿ ಸುನಿಲ ಕುಮಾರ ದೇಸಾಯಿ ನಿರ್ದೇಶಣದ ಜನಪ್ರಿಯ ಚಿತ್ರವಾದ 'ನಮ್ಮೂರು ಮಂದಾರ ಹೂವೇ' ಚಿತ್ರವನ್ನು ತೆಗೆದಳು.ಈ ಚಿತ್ರದಲ್ಲಿ ಶಿವರಾಜಕುಮಾರ ಹಾಗೂ ರಮೇಶ ಅರವಿಂದ ಇಬ್ಬರೂ ನಾಯಕರು.

2000 ರಲ್ಲಿ 'ಯಜಮಾನ' ಚಿತ್ರದಲ್ಲಿ ವಿಷ್ಣುವರ್ಧನ ಜೊತೆ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರ ಸಿಲ್ವರ ಹಾಗೂ ಗೋಲ್ಡನ್ ಜುಬ್ಲಿಯಾಗಿ ಹೋಯಿತು. ಈ ಚಿತ್ರವು ನಟಿ ಪ್ರೇಮಾಳಿಗೆ ತುಂಬಾ ಖುಷಿ ತಂದು ಕೊಟ್ಟಿದೆ. ಬಿಗ್ ಹಿಟ್ ಚಲನಚಿತ್ರ ಉಪೇಂದ್ರ ನಿರ್ದೇಶಣದ 'ಉಪೇಂದ್ರ' ಚಿತ್ರವನ್ನು ತೆಗೆದರು. ಅಷ್ಟೇ ಅಲ್ಲದೇ ಕನ್ನಡದಲ್ಲಿ 50 ಕ್ಕೂ ಹಾಗೂ ತಮಿಳನಲ್ಲಿ 20 ಕ್ಕೂ ಹೆಚ್ಚು ಚಿತ್ರಗಳನ್ನು ತೆಗೆದಿದ್ದಾಳೆ. ಮಲಯಾಲಂನಲ್ಲಿ ಕೂಡ ಚಿತ್ರಗಳನ್ನು ಮಾಡಿದ್ದಾರೆ.

14 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. 2006 ಜುಲೈ 6 ರಲ್ಲಿ ಸಾಪ್ಟವೇರ ಇಂಜಿನಿಯರ ಸುನೀಲ ಜೋತೆ ವಿವಾಹವಾಯಿತು. ವಿವಾಹವಾದ ಮೇಲೆ ಕನ್ನಡದ ಮತ್ತೊಂದು ಚಿತ್ರವನ್ನು 2009 ರಲ್ಲಿ 'ಶಿಶಿರ' ಚಿತ್ರವನ್ನು ತೆಗೆದಳು, ಆದರೆ ಆ ಚಿತ್ರ ಅಷ್ಣೊಂದು ಯಶಸ್ಸು ಕಾಣಲಿಲ್ಲ. ಹೀಗೆ ಎಷ್ಟೊಂದು ಚಿತ್ರಗಳು ಯಶಸ್ಸನ್ನು ಹೊಂದಿವೆ. ಹಾಗೇಯೇ ಇವರ ಮುಂದಿನ ಚಿತ್ರಗಳು ಹಾಗೂ ಇವರ ಕೌಟುಂಬಿಕ ಜೀವನ ಯಶಸ್ಸು ಹೊಂದಲಿ ಎಂದು ಬಯಸೋಣ.

No comments:

Post a Comment