Friday, July 2, 2010

ವಿಷ್ಣುವರ್ಧನ್ ಹಾಗೂ ದ್ವಾರಕೀಶ


ನಟ, ನಿರ್ಮಾಪಕ ದ್ವಾರಕೀಶರವರು 1969 ರಲ್ಲಿ ಚಿತ್ರ ಜಗತ್ತಿಗೆ ಕಾಲಿಟ್ಟರು. ಡಾ.ವಿಷ್ಣುವರ್ಧನರವರು 1972 ರಲ್ಲಿ ಪುಟ್ಟಣ್ಣ ಕಣಗಾಲರವರ ನಾಗರಹಾವು ಚಿತ್ರದಲ್ಲಿ ವೊದಲಬಾರಿಗೆ ನಾಯಕನಾಗಿ ಅಭಿನಯಿಸಿದ್ದಾರೆ. ಅದೇ ಸಂದರ್ಭದಲ್ಲಿ ದ್ವಾರಕೀಶರವರು ನಿರ್ದೇಶಿಸಿದ ಚಿತ್ರಕ್ಕೆ ನಾಯಕನ ಹುಡುಕಾಟ ಪ್ರಾರಂಭಿಸಿದಾಗ ಆಗ ಕಣ್ಣಿಗೆ ಸಿಕ್ಕವರೇ ಡಾ.ವಿಷ್ಣುವರ್ಧನ. ೧೯೭೪ ರಲ್ಲಿ 'ಕಳ್ಳ ಕುಳ್ಳ' ಚಿತ್ರದಲ್ಲಿ ಇಬ್ಬರೂ ಜೋಡಿಯಾಗಿ ಮೊದಲ ಭಾರಿಗೆ ನಟಿಸಿದರು.

ಡಾ.ರಾಜಕುಮಾರ ಮತ್ತು ನರಸಿಹರಾಜು, ಡಾ. ರಾಜ ಮತ್ತು ದ್ವಾರಕೀಶ ಹೀಗೆ ಯಾವ ರೀತಿ ಜೋಡಿಯಾಗಿ ಅಭಿನಯಿಸುತಿದ್ದರೋ ಅದೇ ರೀತಿ ಡಾ.ವಿಷ್ಣುವರ್ಧನ್ ಹಾಗೂ ದ್ವಾರಕೀಶ ಜೋಡಿಯಾಗಿ ನಟಿಸುತಿದ್ದರು. ಹೀಗೆ ಕಳ್ಳ ಕುಳ್ಳ ಚಿತ್ರದಿಂದ ಪ್ರಾರಂಭವಾದ ಚಿತ್ರಗಳು 'ಕಿಟ್ಟು ಪುಟ್ಟು', 'ರಾಜಾ ಕುಳ್ಳು' ಹೀಗೆ ಹಲವಾರು ಚಿತ್ರಗಳಲ್ಲಿ ಇಬ್ಬರೂ ಜೋಡಿಯಾಗಿ ನಟಿಸಲು ಪ್ರಾರಂಭ ಮಾಡಿದರು. ಮಧ್ಯದಲ್ಲಿ ಯಾವ ಕಾರಣಕ್ಕೆ ಬೀರುಕು ಉಂಟಾಯಿತು ಏನೋ 'ಪ್ರೀತಿ ಮಾಡು ತಮಾಷೆ ನೋಡು' ಚಿತ್ರದಲ್ಲಿ ವಿಷ್ಣುವರ್ಧನರವರು ಚಿತ್ರವನ್ನು ಒಪ್ಪಿಕೊಳ್ಳಲಿಲ್ಲ. ನಂತರ ಶಂಕರನಾಗವರು ಚಿತ್ರಕ್ಕೆ ನಾಯಕರಾಗಿ ನಟಿಸಿದರು.

ದ್ವಾರಕೀಶ ನಿರ್ಮಿಸಿದ ಚಿತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಚಿತ್ರದಲ್ಲಿ ವಿಷ್ಣುವರ್ಧನನೇ ನಾಯಕನಾಗಿ ಅಭಿನಯಿಸಿದ್ದಾರೆ. ಇವರಿಬ್ಬರೂ ಬೇರೆ ಬೇರೆಯಾಗಿ ನಟಿಸಿದರೆ ಜನರು ಯಾಕೆ ಜೋಡಿಯಾಗಿ ನಟಿಸಿಲ್ಲ ಎಂದು ಕೇಳುತ್ತಿದ್ದರು. ವಿಷ್ಣುವರ್ಧನ್ ಹಾಗೂ ದ್ವಾರಕೀಶ ಮತ್ತೆ ಜೋಡಿಯಾಗಿ 1993 ರಲ್ಲಿ 'ರಾಯರು ಬಂದರು ಮಾವನ ಮನೆಗೆ' ಚಿತ್ರವನ್ನು ಮಾಡಿದರು. ಆದರೆ ಇವರ ಮಧ್ಯದಲ್ಲಿ ಬಿರುಕಾಗಿಯೇ ಇತ್ತು.

ನಂತರ ಇವರಿಬ್ಬರ ಜೋಡಿಯಾಗಿ ಚಿತ್ರಗಳು ಬರಲೇ ಇಲ್ಲ. ಸುಮಾರು 10 ವರ್ಷದ ಬಳಿಕ ಮತ್ತೆ ಜೋಡಿಯಾಗಿ 2004 ರಲ್ಲಿ 'ಆಪ್ತಮಿತ್ರ' ಚಿತ್ರಕ್ಕೆ ಸಹಿ ಹಾಕಿದರು. ಚಿತ್ರಕ್ಕೆ ಸಹಿ ಹಾಕಿದಾಗ ದ್ವಾರಕೀಶ ತುಂಬಾನೇ ಖುಷಿ ತಂದಿತು ಅಂತಾ ಚಿತ್ರ ತಂಡದ ಮುಂದೆ ಹೇಳಿದರಂತೆ. 'ಪ್ರೋಡಕ್ಷನ ನಂ.೪೭' ಚಿತ್ರಕ್ಕೆ 'ವಿಷ್ಣುವರ್ಧನ' ಹೆಸರಿಡಲೂ, ವಿಷ್ಣುವರ್ಧನ ಅಭಿಮಾನಿಗಳು ಹಾಗೂ ಭಾರತಿ ವಿಷ್ಣುವರ್ಧನರವರು ಅವಕಾಶವನ್ನು ಮಾಡಿಕೊಡುತ್ತಿಲ್ಲಿ. ಚಿತ್ರಕ್ಕೆ ಯಾವ ಹೆಸರು ಇಡುತ್ತಾರೆ ಎಂದು ಕಾದು ನೋಡೋಣ.

No comments:

Post a Comment