Wednesday, July 14, 2010

ಪಾನಿಪೂರಿ


ನಮ್ಮ ಕನ್ನಡ ಚಿತ್ರರಂಗದಲ್ಲಿ ಚಿತ್ರಗಳಿಗೆ ಟೈಟಲ್ ಇಡಲಿಕ್ಕೆ ಹೆಸರು ಸಿಗತಾ ಇಲ್ಲಾ ಕಾಣಸತ್ತೆ. ಯಾಕೆಂದ್ರೆ ಇವಾಗ ಚಿತ್ರಗಳಿಗೆ, ನಮಗೆ ಇಷ್ಟವಾದ ತಿಂಡಿಗಳ ಹೆಸರುಗಳನ್ನು ಇಡಲಿಕ್ಕೆ ಪ್ರಾರಂಭ ಮಾಡಿದ್ದಾರೆ. ಹೌದು 'ಪಾನಿಪೂರಿ' ಎಂಬ ಹೆಸರನ್ನು ಕನ್ನಡ ಚಿತ್ರಕ್ಕೆ ಹೆಸರಿಟ್ಟಿದ್ದಾರೆ. ಪಾಪ ಅವರಿಗೆ ಅಂದು ಏನು ಉಪಯೋಗ ಚಿತ್ರಗಳಿಗೆ ಹೆಸರು ಇಡಲಿಕ್ಕೆ ಶಬ್ದಗಳೇ ಸಿಗತ್ತಾ ಇಲ್ಲ.

'ಕನಸುಗಾರ' ಚಿತ್ರದ ಖ್ಯಾತ ನಿರ್ದೇಶಕ 'ಕರಣ' ಮತ್ತೊಂದು ಚಿತ್ರ 'ಪಾನಿಪೂರಿ'. ಈ ಚಿತ್ರದ ಸಾಂಗ ರಿಕಾರ್ಡಿಂಗ ನಡೆಯಿತು. ಈ ಚಿತ್ರದ ಸಂಗೀತ ನಿರ್ದೇಶನ ನೀಡಿದವರು 'ಜೋಶ್ವಾಶ್ರೀಧರ'. ಇವರು ಕನ್ನಡದವರು ಅಲ್ಲದೇ ಇದ್ದರು 4 ಕನ್ನಡದಲ್ಲಿ ಚಿತ್ರಗಳಲ್ಲಿ ಸಂಗೀತವನ್ನು ನೀಡಿದ್ದಾರೆ. ಹಾಡುಗಳು ತುಂಬಾ ಚನ್ನಾಗಿ ಹಿಟ್ ಆಗಿವೆ. ಇವರು ಈ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಈ ಚಿತ್ರದ ನಾಯಕ ನಮ್ಮ ದೂದ್ ಪೇಡಾ ಹಾಗೂ ಚಾಕಲೇಟ್ ಹೀರೋ 'ದೀಗಂತ್.' ಈ ಚಿತ್ರದಲ್ಲಿ ನಾಯಕಿ ಯಾರು ಅಂತ ಗೌತ್ತಿಲ್ಲ ಯಾಕೆಂದ್ರೆ ಇನ್ನೂ ನಾಯಕಿಯ ಹುಡುಕಾಟದಲ್ಲಿದ್ದಾರೆ. ಹಾಗಾದರೇ, ಈ ಚಿತ್ರದ ಕತೆ ಹೇಗಿದೇ ಅಂತ ನಂತರದಲ್ಲಿ ತಿಳಿದುಕೊಳ್ಳೋಣ.

Friday, July 9, 2010

ಸಂಚಾರಿ


ಕನ್ನಡದ ಚಿತ್ರದಲ್ಲಿ ಚಿತ್ರ ಕಥೆ ಹೇಗೆ ಇರಲಿ, ಆದರೆ ಆ ಚಿತ್ರದ ಹಾಡುಗಳು ಮಾತ್ರ ಸೂಪರ್ ಹಿಟ್ ಆಗತಾ ಇವೆ. ಹಾಗೇನೇ ಕಿರಣ್ ಗೋವಿ ನಿರ್ದೇಶಣದ 'ಸಂಚಾರಿ' ಚಿತ್ರದಲ್ಲಿ ಕೂಡ ಹಾಗೇನೇ ಆಗಿದೆ. ಚಿತ್ರ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ ಆದರೆ ಹಾಡು ಮಾತ್ರ ಸೂಪರ್ ಹಿಟ್ ಆಗಿದೆ. ಅದರಲ್ಲಿ "ಗಾಳಿಯೆ ನೋಡುವ ದೀಪದ ನರ್ತನ" ಎಂಬ ಹಾಡು ಮಾತ್ರ ಸೂಪರ.

ಈ ಹಾಡು ಮಾತ್ರ ಎಲ್ಲರ ಬಾಯಲ್ಲಿ ಬರತಾನೇ ಇದೆ. ಈ ಚಿತ್ರದ ನವ ನಾಯಕ ರಾಜ ಕೂಡ ಈ ಚಿತ್ರದ ಚಿತ್ರೀಕರಣದ ಬಗ್ಗೆ ತುಂಬಾ ಹೇಳಿಕೊಂಡರು. ಈ ಹಾಡು 'ಪಂಚ ಭೂತಗಳ ನರ್ತನದ ಗುಣವನ್ನು ಬಣ್ಣಿಸುವ ಗೀತೆ ಇದಾಗಿದೆ' ಎಂದು ನಿರ್ದೇಶಕ ಗೋವಿಯವರು ಹೇಳಿದ್ದಾರೆ. ಸಂಚಾರಿ ಚಿತ್ರದಲ್ಲಿ ರಾಕಿ ಚಿತ್ರದ ನಾಯಕಿ ಪೂಜಾ ಇದ್ದಾರೆ.

ಈ ಚಿತ್ರದ ಹಾಡುಗಳು ಮಾತ್ರ ತುಂಬಾ ಚನ್ನಾಗಿ ಮೂಡಿಬಂದಿವೆ. ಹಾಡುಗಳಲ್ಲಿ ಮೂರು ಹಾಡುಗಳು ಮೂಗಿದಿದ್ದು, ಇನ್ನೂ ಎರಡು ಹಾಡುಗಳು ಬಾಕಿ ಇವೆ. ಈ ಮೂರು ಹಾಡುಗಳು ತುಂಬಾ ಚನ್ನಾಗಿವೆ ಅಂತ ಹೇಳಿದ್ದಾರೆ. ನಾಗೇಂದ್ರ ಪ್ರಸಾದ ಬರೆದ ಗೀತೆಗಳಿವೆ. ಕಾಯ್ಕಿಣಿ ಬರೆದ ಗೀತೆ ಈಗಾಗ್ಲೆ ಸೂಪರ್ ಹಿಟ್ ಆಗಿವೆ. ಬ್ಯಾಕಾಂಗನಲ್ಲಿ ಚಿತ್ರದ ಹಾಡುಗಳನ್ನು ಶೂಟ್ ಮಾಡಿದ್ದಾರೆ.

ನಾಯಕ ರಾಜ ಈ ಚಿತ್ರದ ಅನುಭವನ್ನು ಎಲ್ಲರ ಮುಂದೆ ಹಂಚಿಕೊಂಡರು. ಒಟ್ಟಿನಲ್ಲಿ ಚಿತ್ರ ಚನ್ನಾಗಿ ಮೂಡಿ ಬರುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ಈ ಚಿತ್ರವನ್ನು 56 ದಿನಗಳಲ್ಲಿ ಬೆಂಗಳೂರು, ಸಕ್ಲೆಶಪೂರ್, ಗೊಲ್ಕಂಡಾ ಹಾಗೂ ಬ್ಯಾಕಾಂಗನಲ್ಲಿ ಶೂಟ್ ಮಾಡಿದ್ದಾರೆ. ಎನೇ ಆಗಲಿ ಮುಂದೆ ಚಿತ್ರ ಯಾವ ರೀತಿ ಮೂಡಿ ಬರುತ್ತದೆ ಎಂದು ಕಾದು ನೋಡೋಣ.

ಎರಡನೇ ಮದುವೆ



ನಮ್ಮ ಪ್ರೇಮ್ ಇತ್ತಿಚಿಗೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ ಅಂತ ಅಂದು ಕೊಂಡರೆ, ಈ ವಾರ ಅವರ ಚಿತ್ರ ಬಿಡುಗಡೆಯಾಗತಾಯಿದೆ. ಯಾವ ಪ್ರೇಮ್ ಅಂತ ತಿಳಿದಿರಾ, ಜೊತೆ ಜೊತೆಯಲಿ ಪ್ರೇಮ್ ಕಂಡ್ರಿ. ಹೌದು ಈ ವಾರ ದಿನೇಶ ಬಾಬು ನಿರ್ದೇಶಣದ 'ಎರಡನೇ ಮದುವೆ' ಚಿತ್ರ ಬಿಡುಗಡೆಯಾಗತಾಯಿದೆ. ಬಹಳ ದಿನಗಳ ನಂತರ ನಾಯಕ ನಟ ಪ್ರೇಮ್, ಚಿತ್ರ ತೆರೆಗೆ ಬರುತ್ತಿದೆ.

ಅನಂತನಾಗ ಹಾಗೂ ಸುಹಾಸಿನಿ ಜೊಡಿಯಾಗಿ ತೆರೆಯ ಮೇಲೆ ಬಂದಿದ್ದಾರೆ. ನಟಿ ಜನ್ನಿಪರ್ ಕೊತ್ವಾಲ್ ಕೂಡ ಇದ್ದಾರೆ. ಪ್ರೇಮನ್ ಜೊಡಿಯಾಗಿ ಜನ್ನಿಪರ್ ಅಂತ ತಿಳಿಯೊ ಹಾಗಿಲ್ಲ ಪ್ರೇಮ್ ಜೊಡಿಯಾಗಿ ಸುಹಾಸಿನಿ ಅಭಿನಯಿಸಿದ್ದಾರೆ. ಸುಹಾಸಿನಿ ಜೊಡಿಯಾಗಿರುವುದು ಪ್ರೇಮಗೆ ತುಂಬಾನೆ ಖುಷಿ ಕೊಟ್ಟಿದೆ ಅಂತೆ. ಅವರ ಜೊಡಿಯಾಗಿರುವ ಕೇಮೆಸ್ಟ್ರಿ ತುಂಬಾ ಚನ್ನಾಗಿ ಇದೆ ಹಾಗೂ ಆ ಚಿತ್ರದ ಕಾಮಿಡಿ ತುಂಬಾ ಇಷ್ಟಾ ಆಗಿದೆ ಅಂತ ಪ್ರೇಮ್ ಅವರು ತಿಳಿಸಿದರು.

ಸುಹಾಸಿನಿ ಹಾಗೂ ಅನಂತನಾಗ ಎರಡನೇಯ ಮದುವೆಯಾಗುವದರ ಬಗ್ಗೆ ಈ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಶರಣ್, ರಂಘಾಯಣ ರಘು ಹಾಗೂ ತಾರಾ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವ ರೀತಿ ಸುಹಾಸಿನಿ ಜೊತೆ ಪ್ರೇಮ್ ಇದ್ದಾರೆ, ಹಾಗೇನೇ ಅನಂತನಾಗ ಜೊತೆ ಜನ್ನಪರ ಕೊತ್ವಾಲ್ ಅಭಿನಯಿಸಿದ್ದಾರೆ.

ಸುರೇಶ ನಿರ್ಮಿಸಿರುವ ಈ ಚಿತ್ರ ತುಂಬಾ ಚನ್ನಾಗಿ ಮೂಡಿ ಬಂದಿದೆ ಅಂತ ನಟ ಪ್ರೇಮ್ ಹೇಳಿದ್ದಾರೆ. ಇದೊಂದು ಕಾಮಿಡಿ ಚಿತ್ರವಾಗಿದೆ ಅಂದಿದ್ದಾರೆ. ಏನೇ ಇರಲಿ ಈ ಚಿತ್ರವನ್ನು ಪ್ರೇಕ್ಷಕರು ತೆರೆ ಮೇಲೆ ಯಾವ ರೀತಿ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆಂದು ಕಾದು ನೋಡೋಣ.

Thursday, July 8, 2010

ಹಾಟ್ ಸೆಕ್ಸ್ ನಮಿತಾ































ಯೋಗೀಸ್

ಲಕ್ ಯಾರಿಗೆ ಹೇಗೆ ಹೊಡಿಯತ್ತೆ ಅಂತ ಗೊತ್ತಿಲ್ಲ, ಹಾಗೇ ಲಕ್ ಹೊಡಿದಿದ್ದು ನಮ್ಮ ಲೂಸ್ ಮಾದನಿಗೆ ಅಂದರೆ ಯೋಗೀಸನಿಗೆ. ಇವತ್ತು ಲೂಸ್ ಮಾದನಿಗೆ 20ರ ಹುಟ್ಟುಹಬ್ಬದ ಸಂಭ್ರಮ, ಈ ಸಂಭ್ರಮವನ್ನು ತಮ್ಮ ಮನೆಯಲ್ಲಿ ಆಚರಿಸಿಕೊಂಡರು. ಇವರ ಮೊದಲ ಚಿತ್ರ 'ದುನಿಯಾ', ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ 'ನಂದ ಲವ್ ನಂದಿತಾ' ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು.

'ನಂದ ಲವ್ ನಂದಿತಾ' ಚಿತ್ರವು ತುಂಬಾನೇ ಹಿಟ್ ಆಯಿತು. ಅಂದಿನಿಂದ ಯೋಗೀಸ್ ಎಲ್ಲರ ಅಚ್ಚು ಮೆಚ್ಚಿನ ನಾಯಕನಾಗಿ ಹಾಗೂ ಇಂದಿನ ಬೇಡಿಕೆಯ ನಾಯಕನಾಗಿದ್ದಾನೆ. ಯೋಗೀಸ್ ರವರ ನಂತರದಲ್ಲಿ ಬರುವ ಚಿತ್ರಗಳು ಚನ್ನಾಗಿ ಮೂಡಿಬಂದವು. ಈಗಿನ ಚಿತ್ರದಲ್ಲಿ 'ದೂಳ್' ಚಿತ್ರೀಕರಣ ಮೂಗಿದಿದ್ದು ತೆರೆ ಕಾಣುವುದೊಂದೆ ಮಾತ್ರ ಬಾಕಿ ಇದೆ.

'ದೇವದಾಸ್' ಚಿತ್ರವು 7 ಹಾಡುಗಳು, 3 ಪೈಟುಗಳು ಬಾಕಿ ಇದೆ, ಇದನ್ನು ಬೇಗ ಮೂಗಿಸುವುದಾಗಿ ಹೇಳಿದರು ನಮ್ಮ ಲೂಸ್ ಮಾದ. ಈ ಚಿತ್ರಗಳು ತೆರೆ ಕಂಡ ಮೇಲೆ ತಾವು 4 ತಿಂಗಳ ಕಾಲ ಯಾವುದೇ ಚಿತ್ರ ಮಾಡುವುದಿಲ್ಲ ಹಾಗೂ ಕೇಲವೊಂದು ಕ್ಲಾಸ್ ಗಳನ್ನು ಮೂಗಿಸುವುದಾಗಿ ಹೇಳಿದರು. ಅಷ್ಟೇ ಅಲ್ಲದೇ ತಾವು ವಿಶ್ರಾಂತಿ ತೆಗೆದುಕೊಳ್ಳುತ್ತಾರೆಂದರು.

ಇಷ್ಟೇಲ್ಲಾ ಆದ ಮೇಲೆ ತಮಗೆ ಇಷ್ಟವಾದ ಹಾಡು ಯಾವುದು ಎಂದು ಕೇಳಿದರೆ, 'ರಾವನ್' ಚಿತ್ರದಿಂದ 'ನಿನ್ನ ಮನೆವರೆಗೂ ಜೊತೆಗೆ ನಾನು ಬರಬಹುದೆ' ಎಂದು ಹೇಳಿದರು. ಅದೇನೆ ಇರಲಿ ಇವತ್ತು ಲೂಸ್ ಮಾದ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಅವರ ಮುಂದೆ ಬರುವ ಚಿತ್ರಗಳು ಹೀಗೆ ಯಶಸ್ಸುನ್ನು ಹೊಂದಲಿ ಎಂದು ಹಾರೈಸೋಣ.

Wednesday, July 7, 2010

ಪ್ರೇಮಾ

ಕನ್ನಡದ ಜನಪ್ರಿಯ ನಟಿ ಹಾಗೂ ಕೊಡಗಿನ ಬೆಡಗಿ ಪ್ರೇಮಾ, ಇವಳ ತಂದೆ ಚಂಗಪ್ಪ, ತಾಯಿ ಕಾವೇರಿ. ಪ್ರೇಮಾ 2 ನೇ ವರ್ಷದ ಪಿಯುಸಿಯಲ್ಲಿ ಇರುವಾಗ ಎಮ್.ಎಸ್.ರಾಜಶೇಖರ್ ನಿರ್ದೇಶಣದ 'ಸವ್ಯಸಾಚಿ' ಪಿಲ್ಮ್ ಆಪರ್ ಬಂದಿತು. ಆವಾಗ ಅವಳ ಕೊನೆಯ ಪರೀಕ್ಷೆಯನ್ನು ಮುಗಿಸಿಕೊಂಡು ಚಿತ್ರವನ್ನು ತೆಗೆಯಲಿಕ್ಕೆ ಹೋಗಿದ್ದರು. 1995 ರಲ್ಲಿ 'ಸವ್ಯಸಾಚಿ' ಚಿತ್ರ ತೆಗೆದರು. ಈ ಚಿತ್ರದ ನಾಯಕ ಶಿವರಾಜಕುಮಾರ.

ಎರಡನೇ ಚಿತ್ರವೇ 'ಓಂ', ಇದು ತುಂಬಾನೇ ಹಿಟ್ ಆಯಿತು. ಈ ಚಿತ್ರದಲ್ಲಿ ಪ್ರೇಮಾ ನಾಯಕಿ ಪಾತ್ರ ವಹಿಸಿದರೆ, ನಾಯಕನ ಪಾತ್ರವನ್ನು ಶಿವರಾಜಕುಮಾರ ವಹಿಸಿದರು. 1998 ರಲ್ಲಿ ಸುನಿಲ ಕುಮಾರ ದೇಸಾಯಿ ನಿರ್ದೇಶಣದ ಜನಪ್ರಿಯ ಚಿತ್ರವಾದ 'ನಮ್ಮೂರು ಮಂದಾರ ಹೂವೇ' ಚಿತ್ರವನ್ನು ತೆಗೆದಳು.ಈ ಚಿತ್ರದಲ್ಲಿ ಶಿವರಾಜಕುಮಾರ ಹಾಗೂ ರಮೇಶ ಅರವಿಂದ ಇಬ್ಬರೂ ನಾಯಕರು.

2000 ರಲ್ಲಿ 'ಯಜಮಾನ' ಚಿತ್ರದಲ್ಲಿ ವಿಷ್ಣುವರ್ಧನ ಜೊತೆ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರ ಸಿಲ್ವರ ಹಾಗೂ ಗೋಲ್ಡನ್ ಜುಬ್ಲಿಯಾಗಿ ಹೋಯಿತು. ಈ ಚಿತ್ರವು ನಟಿ ಪ್ರೇಮಾಳಿಗೆ ತುಂಬಾ ಖುಷಿ ತಂದು ಕೊಟ್ಟಿದೆ. ಬಿಗ್ ಹಿಟ್ ಚಲನಚಿತ್ರ ಉಪೇಂದ್ರ ನಿರ್ದೇಶಣದ 'ಉಪೇಂದ್ರ' ಚಿತ್ರವನ್ನು ತೆಗೆದರು. ಅಷ್ಟೇ ಅಲ್ಲದೇ ಕನ್ನಡದಲ್ಲಿ 50 ಕ್ಕೂ ಹಾಗೂ ತಮಿಳನಲ್ಲಿ 20 ಕ್ಕೂ ಹೆಚ್ಚು ಚಿತ್ರಗಳನ್ನು ತೆಗೆದಿದ್ದಾಳೆ. ಮಲಯಾಲಂನಲ್ಲಿ ಕೂಡ ಚಿತ್ರಗಳನ್ನು ಮಾಡಿದ್ದಾರೆ.

14 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. 2006 ಜುಲೈ 6 ರಲ್ಲಿ ಸಾಪ್ಟವೇರ ಇಂಜಿನಿಯರ ಸುನೀಲ ಜೋತೆ ವಿವಾಹವಾಯಿತು. ವಿವಾಹವಾದ ಮೇಲೆ ಕನ್ನಡದ ಮತ್ತೊಂದು ಚಿತ್ರವನ್ನು 2009 ರಲ್ಲಿ 'ಶಿಶಿರ' ಚಿತ್ರವನ್ನು ತೆಗೆದಳು, ಆದರೆ ಆ ಚಿತ್ರ ಅಷ್ಣೊಂದು ಯಶಸ್ಸು ಕಾಣಲಿಲ್ಲ. ಹೀಗೆ ಎಷ್ಟೊಂದು ಚಿತ್ರಗಳು ಯಶಸ್ಸನ್ನು ಹೊಂದಿವೆ. ಹಾಗೇಯೇ ಇವರ ಮುಂದಿನ ಚಿತ್ರಗಳು ಹಾಗೂ ಇವರ ಕೌಟುಂಬಿಕ ಜೀವನ ಯಶಸ್ಸು ಹೊಂದಲಿ ಎಂದು ಬಯಸೋಣ.

Monday, July 5, 2010

ದೋನಿ ಹಾಗೂ ಸಾಕ್ಷಿ ಸಿಂಗ್ ವಿವಾಹ


ಕ್ರೀಕೆಟ್ ತಂಡದ ನಾಯಕ, ಡ್ರೀಮ್ ಬಾಯ್, ಹೆಂಗಳೇಯರ ಕನಸುಗಾರ ಮಹೇಂದ್ರ ಸಿಂಗ್ ದೋನಿಯವರ ವಿವಾಹ ಯೋಗ ಕೂಡಿ ಬಂದಿದೆ. ಆದ್ರೆ ಇದು ಕೆಲವು ಜನರಿಗೆ ಖುಷಿ ತಂದಿದೆ, ಇನ್ನೂ ಕೆಲವು ಜನರಿಗೆ (ದೋನಿಯ ಬಲೆಗೆ ಬಿದ್ದ ಹುಡುಗಿಯರಿಗೆ) ಖುಷಿ ತಂದಿಲ್ಲ. ಹೌದು ದೋನಿಯನ್ನು ವಿವಾಹವಾದುದು ಅವನ ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ರಾವತ್.

ಸಾಕ್ಷಿ ದೋನಿಯ ಶಾಲಾ ಗೆಳತಿಯಂತೆ ಜುಲೈ ದಿನಾಂಕ 3 ರಂದು ಇವರಿಬ್ಬರ ನಿಶ್ಚಿತಾರ್ಥ ಆಯಿತು. ದಿನಾಂಕ 4 ರಂದು ಇವರ ರಾತ್ರಿ 8 ಗಂಟೆಗೆ ಮದುವೆ ಮಾಡಿಕೊಂಡರು. ಸಾಕ್ಷಿ ಬಗ್ಗೆ ಹೇಳಬೇಕು ಅಂದರೆ ಅವಳ ಹುಟ್ಟೂರು ಔರಂಗಾಬಾದ್, ಬೆಳೆದಿದ್ದು ರಾಂಚಿಯಲ್ಲಿ. ಇವಳ ಶಿಕ್ಷಣ ಹೋಟೆಲ್ ಮ್ಯಾನೇಜಮೆಂಟ್. ಇವರ ಕುಟುಂಬ ನೆಲೆಸಿದ್ದು ಡೆಹ್ರಾಡೂನ್ ನಲ್ಲಿ.

ದೋನಿ ಹಾಗೂ ಸಾಕ್ಷಿಯೂ ಡಿಎವಿ ಸ್ಕೂಲನಲ್ಲಿ ಪ್ರೆಂಡ್ಸ್ ಆಗಿದ್ದರು. ಇವರ ಮದುವೆಯ ನಿಶ್ಚಿತಾರ್ಥ ಗುಟ್ಟಾಗಿಯೇ ಮಾಡಿಕೊಂಡಿದ್ದರು. ಕೇವಲ ಎರಡು ಕುಟುಂಬಗಳು ತಮ್ಮ ಖಾಸಾ ಸಂಭಂದಿಕರಿಗೆ ಮಾತ್ರ ಹೇಳಿದ್ದರು. ಅವರಲ್ಲಿ ಒಬ್ಬರು ಟಿವಿ ಚಾನೇಲಗೆ ತಿಳಿಸಿದ್ದರು. ಇವರ ಮದುವೆಗೆ ಬಾಲಿವೂಡ ಹೀರೋ - ಹೀರೋಯಿನ್ ಗಳು ಹಾಗೂ ಕ್ರಿಕೇಟ್ ಆಟಗಾರರು ಎಲ್ಲರೂ ಬಂದಿದ್ದರು.

ದೋನಿಯ ಜೋತೆ ಎಷ್ಟೊಂದು ಹೀರೋಯಿನ್ ರು ಜೋತೆ ಅಪೇರ್ಸ ಇದ್ದವು. ದಿಪಿಕಾ ಪಡಕೋನಿ, ಲಕ್ಷ್ಮಿ ರೈ, ಹೀಗೆ ಮುಂತಾದವರು ಇದ್ದರೂ ಆದರೆ ದೋನಿ ತನ್ನ ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ರಾವತ್ ನ್ನು ವಿವಾಹವಾದನು. ಅಂತೂ ದೋನಿಯ ವಿವಾಹವು ತನ್ನ ಗೆಳತಿಯ ಜೋತೆ ನಡೆಯಿತು. ಅವರ ವೈವಾಹಿಕ ಜೀವನ ಸುಖವಾಗಿರಲಿ ಎಂದು ಹಾರೈಸೋಣ.

Friday, July 2, 2010

ವಿಷ್ಣುವರ್ಧನ್ ಹಾಗೂ ದ್ವಾರಕೀಶ


ನಟ, ನಿರ್ಮಾಪಕ ದ್ವಾರಕೀಶರವರು 1969 ರಲ್ಲಿ ಚಿತ್ರ ಜಗತ್ತಿಗೆ ಕಾಲಿಟ್ಟರು. ಡಾ.ವಿಷ್ಣುವರ್ಧನರವರು 1972 ರಲ್ಲಿ ಪುಟ್ಟಣ್ಣ ಕಣಗಾಲರವರ ನಾಗರಹಾವು ಚಿತ್ರದಲ್ಲಿ ವೊದಲಬಾರಿಗೆ ನಾಯಕನಾಗಿ ಅಭಿನಯಿಸಿದ್ದಾರೆ. ಅದೇ ಸಂದರ್ಭದಲ್ಲಿ ದ್ವಾರಕೀಶರವರು ನಿರ್ದೇಶಿಸಿದ ಚಿತ್ರಕ್ಕೆ ನಾಯಕನ ಹುಡುಕಾಟ ಪ್ರಾರಂಭಿಸಿದಾಗ ಆಗ ಕಣ್ಣಿಗೆ ಸಿಕ್ಕವರೇ ಡಾ.ವಿಷ್ಣುವರ್ಧನ. ೧೯೭೪ ರಲ್ಲಿ 'ಕಳ್ಳ ಕುಳ್ಳ' ಚಿತ್ರದಲ್ಲಿ ಇಬ್ಬರೂ ಜೋಡಿಯಾಗಿ ಮೊದಲ ಭಾರಿಗೆ ನಟಿಸಿದರು.

ಡಾ.ರಾಜಕುಮಾರ ಮತ್ತು ನರಸಿಹರಾಜು, ಡಾ. ರಾಜ ಮತ್ತು ದ್ವಾರಕೀಶ ಹೀಗೆ ಯಾವ ರೀತಿ ಜೋಡಿಯಾಗಿ ಅಭಿನಯಿಸುತಿದ್ದರೋ ಅದೇ ರೀತಿ ಡಾ.ವಿಷ್ಣುವರ್ಧನ್ ಹಾಗೂ ದ್ವಾರಕೀಶ ಜೋಡಿಯಾಗಿ ನಟಿಸುತಿದ್ದರು. ಹೀಗೆ ಕಳ್ಳ ಕುಳ್ಳ ಚಿತ್ರದಿಂದ ಪ್ರಾರಂಭವಾದ ಚಿತ್ರಗಳು 'ಕಿಟ್ಟು ಪುಟ್ಟು', 'ರಾಜಾ ಕುಳ್ಳು' ಹೀಗೆ ಹಲವಾರು ಚಿತ್ರಗಳಲ್ಲಿ ಇಬ್ಬರೂ ಜೋಡಿಯಾಗಿ ನಟಿಸಲು ಪ್ರಾರಂಭ ಮಾಡಿದರು. ಮಧ್ಯದಲ್ಲಿ ಯಾವ ಕಾರಣಕ್ಕೆ ಬೀರುಕು ಉಂಟಾಯಿತು ಏನೋ 'ಪ್ರೀತಿ ಮಾಡು ತಮಾಷೆ ನೋಡು' ಚಿತ್ರದಲ್ಲಿ ವಿಷ್ಣುವರ್ಧನರವರು ಚಿತ್ರವನ್ನು ಒಪ್ಪಿಕೊಳ್ಳಲಿಲ್ಲ. ನಂತರ ಶಂಕರನಾಗವರು ಚಿತ್ರಕ್ಕೆ ನಾಯಕರಾಗಿ ನಟಿಸಿದರು.

ದ್ವಾರಕೀಶ ನಿರ್ಮಿಸಿದ ಚಿತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಚಿತ್ರದಲ್ಲಿ ವಿಷ್ಣುವರ್ಧನನೇ ನಾಯಕನಾಗಿ ಅಭಿನಯಿಸಿದ್ದಾರೆ. ಇವರಿಬ್ಬರೂ ಬೇರೆ ಬೇರೆಯಾಗಿ ನಟಿಸಿದರೆ ಜನರು ಯಾಕೆ ಜೋಡಿಯಾಗಿ ನಟಿಸಿಲ್ಲ ಎಂದು ಕೇಳುತ್ತಿದ್ದರು. ವಿಷ್ಣುವರ್ಧನ್ ಹಾಗೂ ದ್ವಾರಕೀಶ ಮತ್ತೆ ಜೋಡಿಯಾಗಿ 1993 ರಲ್ಲಿ 'ರಾಯರು ಬಂದರು ಮಾವನ ಮನೆಗೆ' ಚಿತ್ರವನ್ನು ಮಾಡಿದರು. ಆದರೆ ಇವರ ಮಧ್ಯದಲ್ಲಿ ಬಿರುಕಾಗಿಯೇ ಇತ್ತು.

ನಂತರ ಇವರಿಬ್ಬರ ಜೋಡಿಯಾಗಿ ಚಿತ್ರಗಳು ಬರಲೇ ಇಲ್ಲ. ಸುಮಾರು 10 ವರ್ಷದ ಬಳಿಕ ಮತ್ತೆ ಜೋಡಿಯಾಗಿ 2004 ರಲ್ಲಿ 'ಆಪ್ತಮಿತ್ರ' ಚಿತ್ರಕ್ಕೆ ಸಹಿ ಹಾಕಿದರು. ಚಿತ್ರಕ್ಕೆ ಸಹಿ ಹಾಕಿದಾಗ ದ್ವಾರಕೀಶ ತುಂಬಾನೇ ಖುಷಿ ತಂದಿತು ಅಂತಾ ಚಿತ್ರ ತಂಡದ ಮುಂದೆ ಹೇಳಿದರಂತೆ. 'ಪ್ರೋಡಕ್ಷನ ನಂ.೪೭' ಚಿತ್ರಕ್ಕೆ 'ವಿಷ್ಣುವರ್ಧನ' ಹೆಸರಿಡಲೂ, ವಿಷ್ಣುವರ್ಧನ ಅಭಿಮಾನಿಗಳು ಹಾಗೂ ಭಾರತಿ ವಿಷ್ಣುವರ್ಧನರವರು ಅವಕಾಶವನ್ನು ಮಾಡಿಕೊಡುತ್ತಿಲ್ಲಿ. ಚಿತ್ರಕ್ಕೆ ಯಾವ ಹೆಸರು ಇಡುತ್ತಾರೆ ಎಂದು ಕಾದು ನೋಡೋಣ.

Thursday, July 1, 2010

ವಿಷ್ಣುವರ್ದನ ಹೆಸರಿಗೆ ಅವರವರ ಅಭಿಪ್ರಾಯಗಳು


ನಟ ದ್ವಾರಕೀಶರವರು ನಿರ್ಮಿಸಿದ ಚಿತ್ರಕ್ಕೆ ವಿಷ್ಣುವರ್ದನ ಎಂಬ ಹೆಸರಿಡಲು ಹೊರಟಾಗ ಭಾರತಿ ವಿಷ್ಣುವರ್ದನರವರು ಹಾಗೂ ವಿಷ್ಣುವರ್ದನ ಅಭಿಮಾನಿಗಳು ದ್ವಾರಕೀಶರವರ ಅನುಮತಿಯನ್ನು ನಿರಾಕರಿಸಿದರು.

ವಿಷ್ಣುವರ್ದನ ಅಭಿಮಾನಿಗಳು ಹೇಳುವ ಪ್ರಕಾರ "ಡಾ.ವಿಷ್ಣುವರ್ದನರವರ ಹೆಸರು ಇಡಲು ನಾವು ಯಾವುದೇ ರೀತಿಯ ಅನುಮತಿಯನ್ನು ಕೋಡಲಾಗುವುದಿಲ್ಲ ಅವರು ದುಡ್ಡಿಗೊಸ್ಕರ ಚಿತ್ರಕ್ಕೆ ಹೆಸರಿಡಲು ಹೋರಟಿದ್ದಾರೆ" ಎಂದು ಹೇಳಿದರು.

ಭಾರತಿ ವಿಷ್ಣುವರ್ದನರವರು "ನಾನೂ ಈ ಚಿತ್ರಕ್ಕೆ ವಿಷ್ಣುವರ್ದನರವರ ಹೆಸರಿಡಲು ದ್ವಾರಕೀಶರವರಿಗೆ ಬೇಡ ಎಂದು ಹೇಳಿದ್ದೇನೆ. ಆದರು ಅವರು ಅದನ್ನು ಲಕ್ಷ ಕೋಡದೆ, ವಿಷ್ಣುವರ್ದನ ಎಂದು ಹೆಸರಿಡಲು ಮುಂದಾಗಲೂ ಹೋರಟಿದ್ದಾರೆ. ಹಿಂದೆ ಅವರು ಎನೂ ಮಾಡಿದ್ದಾರೆಂದು ನಮಗೆ ಗೊತ್ತು, ಆದರೆ ನಾವು ಅದನ್ನು ಹೇಳತಾಯಿಲ್ಲ ಆ ವಿಷಯವನ್ನು ಹೇಳಿದರೆ ಬೇರೆನೇ ಆಗುತ್ತೇ. ದ್ವಾರಕೀಶರವರು ಮಕ್ಕಳ ಮೇಲೆ ಹಾಗೂ ದೇವರ ಮೇಲೆ ಆಣೇ ಮಾಡುವುದು ಅವರಿಗೆ ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ವಿಷ್ಣುವರ್ದನರವರ ಹೆಸರಿಡಲು ನಾವು ಯಾವುದೇ ರೀತಿಯ ಅನುಮತಿ ಮಾಡಿ ಕೊಡುವುದಿಲ್ಲ" ಎಂದು ಅಭಿಪ್ರಾಯವನ್ನು ಹೇಳಿದರು.

ಕರ್ನಾಟಕ ವಾಣಿಜ್ಯ ಮಂಡಳಿಯ ಅದ್ಯಕ್ಷರಾದ ವಸಂತ ಕುಮಾರ ಪಾಟೀಲರವರು "ನಾವೂ ಡಾ.ವಿಷ್ಣುವರ್ದನರವರ ಹೆಸರನ್ನು ಬದಲಾಗಿ ಬೇರೆ ಹೆಸರಿಡಲೂ ಹೇಳಿ ಈ ಹೆಸರನ್ನು ನಿರಾಕರಿಸಿದ್ದೇವೆ. ಹಾಗೇನೆ ಭಾರತಿ ವಿಷ್ಣುವರ್ದನರವರು ಕೂಡ ಹೆಸರಿಡಲೂ ಬೇಡ ಎಂದು ಹೇಳಿದ್ದಾರೆ." ಎಂದು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿವಾದಕ್ಕೆ ಇಡಾದ ವಿಷ್ಣುವರ್ದನ ಟೈಟಲ


ನಿರ್ಮಾಪಕ ಹಾಗೂ ನಟರಾದ ದ್ವಾರಕೀಶ ನಿರ್ಮಾಣ ಮಾಡಿದ ಸುದೀಪ ಅದಕ್ಕೆ ನಾಯಕನಾಗಿ ಚಿತ್ರವನ್ನು ಮಾಡುತಿದ್ದಾರೆ. ಆ ಚಿತ್ರಕ್ಕೆ ವಿಷ್ಣುವರ್ದನ ಎಂಬ ಹೆರಸರಿಡಲೂ ತಯಾರಾಗಿದ್ದು ಆದರೆ ಆ ಹೆಸರು ಈಗ ವಾಗ್ದಾಳಿಗೆ ಕಾರಣವಾಗಿದೆ. ಈ ಚಿತ್ರಕ್ಕೆ ನಾಮಕರಣವನ್ನು ಆಯ್ಕೆ ಮಾಡಿದ್ದು ನಾಯಕ ನಟ ಸುದೀಪ. ಆದರೆ ಡಾ.ವಿಷ್ಣುವರ್ದನನ ಅಭಿಮಾನಿಗಳು ಹಾಗೂ ಭಾರತಿ ವಿಷ್ಣುವರ್ದನ 'ವಿಷ್ಣುವರ್ದನ್' ಹೆಸರಿಡಲೂ ಸಮ್ಮತಿ ಮಾಡಿಕೊಡುವದಿಲ್ಲ ಎಂದಿದ್ದಾರೆ.

ಆದರೆ ಇದು ಈ ಚಿತ್ರ ಡಾ.ವಿಷ್ಣುವರ್ದನ ರವರ ಜೀವನ ಚರಿತ್ರೆ ಇದಾಗಿಲ್ಲ ಕಾರಣ 'ವಿಷ್ಣುವರ್ದನ' ಹೆಸರಿಟ್ಟರೆ ತಪ್ಪಾಗಲಾರದು ಅದು ತನ್ನ ಪ್ರಾಣ ಸ್ನೇಹಿತನ ಹೆಸರಾಗಿದ್ದರಿಂದ ಅವರ ನೆನಪಿಗೊಸ್ಕರ ಈ ಹೆಸರನ್ನು ಇಡಲೂ ಇಷ್ಟ ಪಡುತ್ತೇನೆ. ತಾನೂ ದುಡ್ಡಿಗೊಸ್ಕರ ಅಲ್ಲಾ ಮತ್ತು ಪ್ರಚಾರಿಗೊಸ್ಕರ ಅಲ್ಲಾ ಇದು ತನ್ನ ಸ್ನೇಹಿತನ ನೆನಪಿಗಾಗಿ ಮಾತ್ರ.

"ನಾನು ನನ್ನ ಮಕ್ಕಳ ಮೇಲೆ ಮತ್ತು ದೇವರ ಮೇಲೆ ಆಣೇ ಮಾಡಿ ಹೇಳುತ್ತೇನೆ, ನಾನು ದುಡ್ಡಿಗೊಸ್ಕರವಾಗಲಿ, ಪ್ರಚಾರಕ್ಕಾಗಲಿ ಈ ಹೆಸರಿಡುತ್ತೀಲ್ಲ ಕೇವಲ ಸ್ನೇಹಿತನ ಮೇಲಿನ ಪ್ರೀತಿಗಾಗಿ ಮಾತ್ರ ಹೆಸರಿಡುತ್ತೇನೆ. ಅಷ್ಟೇ ಅಲ್ಲದೇ ನಾನು ಭಾರತಿಯವರ ಜೊತೆ ಮಾತನಾಡಿಕೊಂಡು ಹೆಸರಿಡುತ್ತೇನೆ. ಅಷ್ಟೇ ಅಲ್ಲದೆ ತಾನು ಡಾ.ವಿಷ್ಣುವರ್ದನರವರ ಜೀವನ ಚರಿತ್ರೆಯ ಚಿತ್ರವನ್ನು ನಿರ್ಮಾಣ ಮಾಡಬೇಕೆಂದಿದ್ದೇನೆ. ಇದು ನನ್ನ ಆಶೆ ಕೂಡ ಹೌದು" ಎಂದು ದ್ವಾರಕೀಶರವರು ಹೇಳಿದರು.

ಆದರೆ ಭಾರತಿ ವಿಷ್ಣುವರ್ದನ ರವರು ಹಾಗೂ ವಿಷ್ಣುವರ್ದನರವರ ಅಭಿಮಾನಿಗಳು ವಿಷ್ಣುವರ್ದನ ಹೆಸರಿಡಲು ಸಮ್ಮತಿ ಕೊಟುವದಿಲ್ಲ ಎಂದು ಹೇಳಿದ್ದಾರೆ. ಕರ್ನಾಟಕ ವಾಣಿಜ್ಯ ಮಂಡಳಿಯ ಅದ್ಯಕ್ಷರಾದ ವಸಂತ ಕುಮಾರ ಪಾಟೀಲರವರು ಬೇರೆ ಹೆಸರಿಡಲೂ ಸೂಚಿಸಿದ್ದಾರೆ. ಮುಂದೆನಾಗುತ್ತೆ ಅಂತ ಕಾದು ನೋಡೋಣ