Friday, June 7, 2013

bigg boss kannada vasati shale




























big boss june 6


ಈ ಟಿವಿ ಕನ್ನಡ ವಾಹಿನಿಯಲ್ಲಿ ಬರುವ ರಿಯಾಲಿಟಿ ಶೋ ಬಿಗ್ ಬಾಸ್ ದಲ್ಲಿ ೭೪ ನೇ ದಿನ ಅಲ್ಲಿರುವ ಎಲ್ಲ ಸದಸ್ಯರು ವಿದ್ಯಾರ್ಥಿಯಾಗಿ ನಟಿಸುತಿದ್ದಾರೆ. ಬಿಗ್ ಬಾಸ್  ನ ವಿದ್ಯಾರ್ಥಿಗಳು ಒಂದು ದಿನ ಪಿಕ್ನಿಕ ಕೂಡ ಹೋಗಿದರು. ಎಲ್ಲವನ್ನು ಮುಗಿಸಿ ಬಿಗ್ ಬಾಸ್ ಶಾಲೆಯ ವಾರ್ಷಿಕ ಸಮ್ಮೇಳನವನ್ನು ಮಾಡಲು ತಿಳಿಸಿದರು.

ಶಾಲೆಯ ವಾರ್ಷಿಕ ಸಮ್ಮೇಳನದಲ್ಲಿ ಚಂದ್ರಿಕಾ ಅದ್ಯಕ್ಷರ ಸ್ಥಾನವನ್ನು ಕೊಟ್ಟರು. ಉತ್ತಮ ವಿದ್ಯರ್ಥಿಯನ್ನಗಿ ವಿಜಯ ರಾಘವೇಂದ್ರನಿಗೆ ಕೊಟ್ಟರು.ಉತ್ತಮ ಶಿಕ್ಷಕ ಎಂದು ಅರುಣ್ ಸಾಗರಿಗೆ ಕೊಟ್ಟರು. ಅನುಶ್ರಿ, ಅರುಣ್, ವಿಜಯ, ನರೇಂದ್ರ ಬಾಬು, ಹಾಗು ನಿಕಿತ ಎಲ್ಲರು ಕೂಡಿ ಹಾಡಿಗೆ ಹೆಜ್ಜೆಯನ್ನು ಹಾಕಿದರು. ನರೇಂದ್ರ  ಬಾಬು ಸುದೀಪ್ ರವರ, ವಿಜಯ ಅಂಬರಿಶರವರ ಹಾಗೆ, ಅರುಣ್ Dr. ರಾಜಕುಮರರವರ್, ಅನುಶ್ರಿ ಕಲ್ಪನಾ ತರಹ, ನಿಕಿತ ಮಂಜುಳಾ ರವರ ನಟನೆಯನ್ನು ತುಂಬಾ ಸೊಗಸಾಗಿ ಮಾಡಿದರು. ಅದರಲ್ಲಿ ನರೇಂದ್ರ ಬಾಬು ತುಂಬಾ ಚನ್ನಾಗಿ ನಡೆಸಿ ಕೊಟ್ಟರು.

ಹೇಗೆ ಎಲ್ಲರು ತಮ್ಮ ಶಾಲಾ ದಿನಗಳನ್ನು ನೆನೆಸಿಕೊ ತಮ್ಮ ಟಾಸ್ಕನ್ನು ನಡೆಸಿಕೊಟ್ಟರು. ಅದೇ ರೀತಿ ಅವರು ವಾರದ ಬಜೆಟನ್ನು ಚನ್ನಾಗಿ ಮಾಡಿಕೊಟ್ಟರು.

Wednesday, June 5, 2013

big boss june 4



ಈ ಟಿವಿ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಬಂದ ಟಾಸ್ಕ್ 'ಕನ್ನಡ ವಸತಿ ಶಾಲೆ'. ಈ ಟಾಸ್ಕ್ ನಲ್ಲಿ ಅನುಶ್ರಿ ಕನ್ನಡವನ್ನು ಕಲಿಸಿಕೊಟ್ಟರು. ನಂತರ ಬಂದವರು ಅರುಣ ಅವರು ಕಲೆಯಬಗ್ಗೆ ಹೇಳಿ ಮಂಗನ ಹಾಗೆ ಮಾಡಲು ಅನುಶ್ರಿಗೆ ಹೇಳಿದರು. ಹೀಗೆ ಶಾಲೆ ಚನ್ನಾಗಿ ನಡೆಬೇಕಾದರೆ ಮಳೆ ಶುರುವಾಯಿತು. ಆಗ ಸ್ವಲ್ಪ ಸಮಯ ವಿಶ್ರಾಂತಿಯನ್ನು ಕೊಡಲಾಯಿತು.

ಮಳೆ ನಿಂತ ಮೇಲೆ ಬಂದವರು ಇಂಗ್ಲಿಷ್ ಟೀಚರ್ ಚಂದ್ರಿಕಾ. ಅವರು ಪಾಠ ಮಾಡಬೇಕಾದ ಸಂದರ್ಭದಲ್ಲಿ ಅರುಣ್ ಬಾಲಕ ತಿಟಲೆ ಮಾಡಿದನು ಅಷ್ಟೇ ಅಲ್ಲದೆ ಅವರನ್ನು ತುಂಬಾನೇ ಗೋಳು ಹೊಯ್ದುಕೊಂಡನು. ಅದಕ್ಕಾಗಿ ಚಂದ್ರಿಕಾ ಮೇಡಂ  ಅವರಿಗೆ ಶಿಕ್ಷೆಯನ್ನು ಕೊಟ್ಟರು. ಅದೇನೆಂದರೆ ಅರುಣ್ ಅವರನ್ನು ಬೆಂಚ್ ಮೇಲೆ ನಿಲ್ಲಿಸಿದರು. ಈ ಶಿಕ್ಷೆ ಕೊಟ್ಟರು ಅರುಣ್ ತುಂಟಾಟಗಳು ಮುಂದುವರಿದೇ ಇದ್ದವು.

ಹೀಗೆ ಎಲ್ಲ ಪಾಠ ಮುಗಿದು ಎಲ್ಲರು ಮನೆಗೆ ಹೋದರು. ಅದೇ ಸಂದರ್ಭದಲ್ಲಿ ಚಂದ್ರಿಕಾ ಬಟ್ಟೆಯನ್ನು ಬದಲಾಯಿಸಲು ಹೋಗಬೇಕಾದರೆ ಅವರು ಜಾರಿ ಕೆಳಗಡೆ ದಬ್ಬನೆ ಬಿದ್ದು ಬಿಟ್ಟರು. ಇವರು ಬಿದ್ದದನ್ನು ನೋಡಿ ಅಲ್ಲಿರುವರೆಲ್ಲು ನೋಡಿ ನಗಲು ಆರಂಬಿಸಿದರು.

big boss june 4



ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋ ನಲ್ಲಿ ಇರುವ ಸದಸ್ಯರನ್ನು ತಮ್ಮ ಮನೆಯವರನ್ನು ನೋಡಿ ಸಂತೋಷದಿಂದ ಆ ದಿನವನ್ನು ಮುಂದಿಡಿದರು.   72ನೇ ದಿನ ಪೂರೈಸಿದ ಬಿಗ್ ಬಾಸ್  ಅಲ್ಲಿರುವ ಸದಸ್ಯರಿಗೆ ಮಾತೊಂದು ವಿಶೇಷವಾದ ಟಾಸ್ಕ್ ನ್ನು ನೀಡಿದರು ಅದುವೇ 'ಕನ್ನಡ ವಸತಿ ಶಾಲೆ'.  ಈ ಕನ್ನಡ ವಸತಿ ಶಾಲೆಯಲ್ಲಿ ಚಂದ್ರಿಕಾ ಇಂಗ್ಲಿಷ್ ಟೀಚರ್, ಅರುಣ್ ಸಾಗರ್ ನಾಟಕ ಹಾಗು ಕಲೆಯ ಟೀಚರ್ ಮತ್ತು ಅನುಶ್ರಿ ಗಣಿತ ಟೀಚರ್ ಆಗಿದ್ದು, ಉಳಿದವರು ವಿದ್ಯಾರ್ಥಿಗಳು.

ಅಷ್ಟೇ ಅಲ್ಲದೆ ಒಬ್ಬ ಟೀಚರ್ ಪಾಠ ಮಾಡಬೇಕಾದರೆ ಉಳಿದವರೆಲ್ಲರೂ ವಿದ್ಯರ್ಥಿಗಳಗಿರಬೇಕು. ಎಲ್ಲರಿಗು ಸ್ಕೂಲ್ ಬ್ಯಾಗ್, ಟಿಫಿನ್ ಬಾಕ್ಸ್, ಟೈ, ಶಾಲಾ ಸಮವಸ್ತ್ರಗಳನ್ನು ಕೊಡಲಾಯಿತು. ಎಲ್ಲರು ತಮ್ಮ ಟಿಫಿನ ಬಾಕ್ಸ, ಶಾಲಾ ಸಮವಸ್ತ್ರಗಳನ್ನೂ, ಸ್ಕೂಲ್ ಬ್ಯಾಗ ಹಾಗು ಟೈ ಯನ್ನು ಹಾಕಿಕೊಂಡರೆ ನಮ್ಮ ಗುರುಗಳು ಮಾತ್ರ ತಮ್ಮ ಕಾವಿ ವಸ್ತ್ರದ ಮೇಲೆ ಟೈ ಯನ್ನು ಹಾಕಿಕೊಂಡರು.

ಎಲ್ಲ ವಿದ್ಯಾರ್ಥಿಗಳು ಶಾಲೆಗೆ ಬಂದರೆ ಟೀಚರ್ ಮಾತ್ರ ಇನ್ನು ಶಾಲೆಗೆ ಬಂದಿಲ್ಲ. ಆಗ ತುಂಟ ಬಾಲಕ ಅರುಣ್ ಕಪ್ಪು ಕಲೆಗೆ ಮೇಲೆ 'ಕುಳ್ಳಿ ಮಿಸ್ ಮಳ್ಳಿ ಮಿಸ್ ಮಂಚಕ್ಕೆಷ್ಟು ಕಾಲು? ' ಬರೆದಿದ್ದನು. ಇದನ್ನು ನೋಡಿದ ಅನುಶ್ರಿ ಟೀಚರ್ ಅದರ ಬಗ್ಗೆ ವಿವರಿಸಿ, ೧ ರಿಂದ ೫ ರವಗೆ ಸಂಖ್ಯೆಗಳನ್ನು ಕಲಿಸಿದಳು.  ಅನುಶ್ರಿ ನಂತರ್ ಅರುಣ್ ಸಾಗರ್ ಕಲೆಯ ಬಗ್ಗೆ ತಿಳಿಸಿ ಚಿತ್ರವನ್ನು ಬಿಡಿಸಲಿಕ್ಕೆ ಎಲ್ಲರನ್ನು ಹೇಳಿ ಬಿಡಿಸಿದರು. ಆಗ ಮಳೆ ಪ್ರಾರಂಬವಾಯಿತು. ಬಿಗ್ ಬಾಸ್ ಮನೆ ಮಳೆ ನೀರಿನಿಂದ ತುಂಬಿ ಹೋಯಿತು.

Tuesday, June 4, 2013

big boss






ಈ ಟಿವಿ ಕನ್ನಡ ವಾಹಿನಿಯಲ್ಲಿ ಬರುವ ಬಿಗ್ ಬಾಸ್ ನಲ್ಲಿ ಬಿಗ್ ಬಾಸ್ ಸದಸ್ಯರಿಗೆ ಇಂದು ಎಲ್ಲಿಲ್ಲದ ಸಂತೋಷದ ವಾತಾವರಣ. ಬಿಗ್ ಬಾಸ್ ಎಲ್ಲ ಸ್ಪರ್ದಿಗಳಿಗೆ  ಸರ್ಪೈಜ್  ಕೊಡುತಿದ್ದಾರೆ.

ಮೊದಲಿಗೆ ಸರ್ಪೈಜ್ ಬಂದದ್ದು ಚಂದ್ರಿಕಗೆ. ಚಂದ್ರಿಕಗೆ ಹಿಂದಿನ ದಿನ ರಾತ್ರಿ ಅವಳ ಮಗ ಬಂದು ಬೇಟಿಯಾಗಿ ಹೋದ. ನಂತರ ಮಾರನೇ ದಿನ ವಿಜಯ ರಾಘವೇಂದ್ರನ ಹೆಂಡತಿ ಬಂದು ಬೇಟಿಯಾಗಿ ಹೋದಳು. ಇದನೆಲ್ಲವನ್ನು ನೋಡಿಕೊಂಡು ಎಲ್ಲರಿಗು ತಮ್ಮ ಮನೆಯವರು ಬೇಟಿಯಾಗಲು ಬರುತ್ತಾರೆ ಎಂದು ಮನವರಿಕೆಯಾಯಿತು.

ಸ್ವಲ್ಪ ಹೊತ್ತಿನ ನಂತರ ನಿಕಿತಾಳ ಅಮ್ಮ ಬಂದು ಬೇಟಿ ಮಾಡಿದಳು. ಅವಳು ಅಮ್ಮನನ್ನು ನೋಡಿ ಸಂತೋಷ್ ಪಟ್ಟು ಎಲ್ಲರ ಸುಖ ಸಂತೋಷವನ್ನು ಕೇಳಿ ಎಲ್ಲರಿಗು ಬೇಟಿ ಮಾಡಿದಳು.

ಹೀಗೆ ಅನುಶ್ರಿ ಅಮ್ಮ, ಅರುಣ ಸಾಗರ್ ಹೆಂಡತಿ ಬಂದು ಎಲ್ಲರನ್ನು ಬೆಟಿಯಾದರು. ಅವರೆಲ್ಲರನ್ನು ನೋಡಿ ಬಿಗ್ ಬಾಸ್ ಸದಸ್ಯರಿಗೆ ಸಂತೋಷದ ಕಣ್ಣಿರನ್ನು ಹಾಕಿದರೂ. ಆದರೆ ಸ್ವಾಮಿ ಮನೆಯವರ ಕಡೆಯಿಂದ ಯಾರು ಬರಲಿಲ್ಲ, ಇದರಿಂದ ಸ್ವಾಮಿಜಿಯವರು ಕಣ್ಣಿರು ಕೂಡ ಹಾಕಿದರ, ಆದರೆ ಅದನ್ನು ಯಾರ ಮುಂದೆ ಹೇಳಿಕೊಳಲು ಆಗಲಿಲ. ಅಂದು ಬಿಗ್ ಬಾಸ್ ಮನೆಯಲ್ಲಿ ಸಂತೋಷದ ವಾತಾವರನ ಸುರಿಮಳೆನೆ ಉಂಟಾಯಿತು.

Monday, June 3, 2013

ಬಿಗ್ ಬಾಸ್ ನಿಂದ ಹೊರಗೆ ಬಂದ ಲೂಸ್ ಮಾದ



ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್' ನಿಂದ ಇದ್ದಕ್ಕಿದ್ದಂತೆ ಲೂಸ್ ಮಾದ ಯೋಗೀಶ್ ಹೊರಗೆ ಓಡಿಬಂದಿದ್ದಾರೆ. ಶನಿವಾರವೇ ಮನೆಯಿಂದ ಹೊರಗೆ ಬಂದರು. ಬಿಗ್ ಬಾಸ್ ನಿಂದ ಬೇಸತ್ತ ಲೂಸ್ ಮಾದ ಅಲ್ಲಿಂದ ಹೊರಗೆ ಬಂದು ತಮ್ಮ ಮನೆಯಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುತಿದ್ದರೆ, ಅಂದರೆ ಬೆಂಗಳೂರಿನ ಜೆಪಿ ನಗರದ ತಮ್ಮ ಮನೆಗೆ ಇದ್ದಾರೆ.

ಬಿಗ್ ಬಾಸ್ ಮನೆ ಅಳಿಯನಾಗಿದ್ದ ಲೂಸ್ ಮಾದ ಅಂದರೆ ಬಿಗ್ ಬಾಸ್ ನ ಮತ್ತೊಬ್ಬ್ ಸ್ಪರ್ದಿ ನಿಕಿತಾಳ ಜೊತೆ ಮದುವೆಯನ್ನು ಮಾಡಿಸಲಾಗಿದ್ದು, ಮದುವೆಯಾದ ಮೊದಲನೇ ದಿನವೇ ಬಿಗ್ ಬಾಸ್ ಮನೆಯಿಂದ ನಾಪತ್ತೆಯಾಗಿದ್ದರು. ಸ್ವಲ್ಪ ದಿನಗಳ ನಂತರ ಲೂಸ್ ಮಾದನನ್ನು ಅಲ್ಲಿಗೆ ಕರೆಯಲಾಯಿತು. ಎರಡು ವಾರ ಬಿಗ್ ಬಾಸ್ ಮನೆಯಲ್ಲಿ ಇದ್ದುದರಿಂದ ಮಾದ ಜನರಿಗೆ ಹತ್ತಿರವಾಗುತಿದ್ದ. ಆದರೆ ಲೂಸ್ ಮಾದ ಶನಿವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದರು.
ಲೂಸ್ ಮಾದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ದಿಯಲ್ಲದಿದ್ದರು ಅತಿಥಿಯಾಗಿ ಮನೆಯಲ್ಲಿ ಪ್ರವೇಶವನ್ನು ಮಾಡಿದ್ದನು. ಈ ಸಲದ ವಾರದ ಕಥೆ ಕಿಚ್ಚನ ಜೊತೆಯಲ್ಲೂ ಸುದೀಪ್ ಸಣ್ಣ ಸುಳಿವನ್ನು ಬಿಟ್ಟುಕೊಟ್ಟಿದ್ದರು. ಯೋಗೀಶ್ ಅವರೇ ನೀವೇ ಇಷ್ಟಪಟ್ಟು ಈ ಮನೆಗೆ ಬಂದಿದ್ದು ಎಂಬರ್ಥದಲ್ಲಿ ಸುದೀಪ್ ಹೇಳಿದ್ದರು. ಈ ಮಾತು ಕೇಳಿದ ಕೂಡಲೇ ಯೋಗಿಗೆ ಮಾತ್ರ ಅರ್ಥವಾಯಿತು, ಆದರೆ ಮತ್ತೆ ಯಾರಿಗೂ ಅರ್ಥವಾಗಿರಲಿಲ್ಲ. ಆದರೆ ಯೋಗಿ ಹೊರಗೆ ಹೋದಾಗ ಎಲ್ಲರಿಗು ಅರ್ಥವಾಯಿತು. 

Saturday, June 1, 2013

ಅರುಣ್ ಸಾಗರ್ ಹಾಗೂ ಚಂದ್ರಿಕಾ




ಬಿಗ್ ಬಾಸ್ ನಲ್ಲಿ ತುಲಾಭಾರ ಟಾಸ್ಕ್ ನಲ್ಲಿ ತುಂಬಾನೇ ಶ್ರಮಿಸಿದ ಚಂದ್ರಿಕಾ ಮತ್ತು ನಿಕಿತಾ ಅವರಿಗೆ ಸುದೀಪ್ ತುಂಬಾನೇ ಇಷ್ಟ ಪಟ್ಟರು. ಬೋತ್ ಆಫ್ ಯು ಡಿಡ್ ಎ ಫೆನ್ಟಾಸ್ಟಿಕ್ ಜಾಬ್ ಎಂದು ಕೂಡ ಹೇಳಿದರು. ನಂತರ ಸುದೀಪ್ ಅರುಣ್ ಸಾಗರ್ ಹಾಗೂ ಚಂದ್ರಿಕಾ ಅವರ ಕಡೆ ಗಮನ ಹರಿಸಿದರು.

ಸುದೀಪ್ ಅರುಣ್ ಸಾಗರ್ ಹಾಗೂ ಚಂದ್ರಿಕಾ ಒಬ್ಬರಿಗೊಬ್ಬರು ಅಷ್ಟೋಂದು ಹತ್ತಿರವಾಗಿ ಕುಳಿತಿದ್ದನ್ನು ಕೇಳಿದರು.ಅಷ್ಟೇ ಅಲ್ಲದೆ ಅಲ್ಲಿರುವ ವಾತಾವರಣ ಕೂಡ ತುಂಬಾನೇ ಚೆನ್ನಾಗಿತ್ತು. ಮತ್ತೆ ಚಳಿ ಕೂಡ ಇತ್ತು. ಅಷ್ಟೇ ಅಲ್ಲದೆ ಚಂದ್ರಿಕಾವರು  ಅರುಣ್ ಸಾಗರ್ ಮೇಲೆ ಕುಳಿತುಬಿತ್ತಿದ್ರು ಹೀಗೆ ಎಲ್ಲವನು ಹೇಳಿಕೊಂಡು ಹೋದರು. ನಮ್ಮ ವೀಕ್ಷಕರು ಕೇಳುತ್ತಿದ್ದಾರೆ. ಏನ್ ವಿಶೇಷ ಅರುಣ್ ಸಾಗರ್ ಅವರೇ ಎಂದರು.

ಅರುಣ್ ಸಾಗರ್ಇದಕ್ಕೆ ಉತ್ತರ ಕೊಡಲು ಸ್ವಲ್ಪ ತಡಬಡಾಯಿಸಿದಂತಾದರು ಬಳಿಕ ಬೇರೆ ಏನೋ ಹೇಳಲು ಹೋದರು. ಅದಕ್ಕೆ ಸುದೀಪ್ ಸ್ವಲ್ಪ್ ಅವಕಾಶವನ್ನು ಕೊಡದೆ ನಮಗೆಲ್ಲರಿಗೂ ತಿಳಿಸಿ ಹಾಗು ನಮಗೆ ಎಲ್ಲವೂ ಅರ್ಥವಾಗಿದೆ ಅರುಣ್ ಸಾಗರ್ ಗೆ ಹೇಳಿದರು. ನಿಮ್ಮ ಮತ್ತು ಅವರ ನಡುವೆ ಏನು ನಡೆಯುತ್ತಿದೆ ಎಂದು ಕೇಳಿದರು.

ತದನಂತರ ಎಲ್ಲರ ಅನುಮಾನವನ್ನು ಹೋಗಲಾಡಿಸಲು ಚಂದ್ರಿಕನೆ ಎಲ್ಲಾರಿಗೂ ತಿಳಿಸಿ ಹೇಳಲು ಮುಂದಾದರು. ಆದರೆ ಕಿಚ್ಚ್ ಸುದೀಪ್ ತಮಗೆಲ್ಲ ಗೊತ್ತು ಎಂದು ಹೇಳಿದರು. ಹೀಗೆ ಅರುಣ್ ಸಾಗರ್ ಹಾಗೂ ಚಂದ್ರಿಕಾರ ಬಗ್ಗೆ ಹಿಳುತ್ತ ಎಲ್ಲರನ್ನು ಮನರಂಜಿಸಿದರು.

'ವಾರದ ಕಥೆ ಕಿಚ್ಚನ ಜೊತೆ' ಮೇ 31(1)




ಪ್ರತಿ ಶುಕ್ರವಾರದಂತೆ ಈ ಶುಕ್ರವಾರ ಕೂಡ  (ಮೇ 31) 'ವಾರದ ಕಥೆ ಕಿಚ್ಚನ ಜೊತೆ' ಯಲ್ಲಿ ಕಿಚ್ಚನ ಮಾತು ತುಂಬಾನೇ ಸೊಗಸಾಗಿತ್ತು. ತಮ್ಮದೇ ಆದಂತಹ ಶೈಲಿಯಲ್ಲಿ  ಆಕರ್ಷಕ ನಿರೂಪಣೇಯ ಮಾತಿನ ಮೂಲಕ ಸುದೀಪ್ ಪ್ರತಿವಾರ ತನ್ನ ವೀಕ್ಷಕರಿಗೆ ಮನರಂಜಿಸುತ್ತಿದ್ದಾರೆ. ಈ ವಾರವೂ ಕೂಡ ಅದೇ ರೀತಿ ಮನರಂಜಿಸಿದರು.

ಹಾಗೆ ರಂಜಿಸುತ್ತ ಈ ವರದ ಟಾಸ್ಕ್ ಬಗ್ಗೆ ಪ್ರಸ್ತಾಪಿಸಿದರು, ಹಾಗೆ ಎಲ್ಲರು ತಮ್ಮ ಟಾಸ್ಕ್ ನ್ನು ಚೆನ್ನಾಗಿ ಆಡಿದ್ದಿರಿ ಎಂದೂ ಬೆನ್ನುತಟ್ಟಿದರು. ಹಾಗೆ ಮಾತಿನಲ್ಲಿ ಬ್ರಹ್ಮಾಂಡ ಗುರುಗಳು ಬಿಟ್ಟ ಬಾಂಬ್ ನ್ನು  ನೆನದು ಎದ್ದುಬಿದ್ದು ನಕ್ಕರು. ಅಷ್ಟೇ ಅಲ್ಲದೆ ಅರುಣ್ ಸಾಗರ್ ನೀವೇಗೆ ಸಹಿಸಿಕೊಂಡಿರಿ ಎಂದೂ ಅವರನ್ನು ಕೇಳಿದರು.

ಜಲಸಂರಕ್ಷಣೆ ಟಾಸ್ಕ್ ನಲ್ಲಿ ಒಂದು ಕಡೆ ಗುರುಗಳು ಎರಡೂ ತೂತುಗಳನ್ನು ಮುಚ್ಚಿ ಹಿಡಿದಿದ್ದರು. ಇನ್ನೊಂದು ಕಡೆ ಅರುಣ್ ಸಾಗರ್ ಇದ್ದರು. ಇದೇ ಸಂದರ್ಭದಲ್ಲಿ ಗುರುಗಳು ಮತ್ತೆ ಬಾಂಬ್ ಹಾಕಿದರು. ಎರಡೂ ಕೈಗಳಿಂದ ಟ್ಯಾಂಕ್ ನ ತೂತನ್ನು ಮುಚ್ಚಿಕೊಂಡಿದ್ದ ಅರುಣ್ ಮೂಗು ಮುಚ್ಚಿಕೊಳ್ಳಲು ಸಾದ್ಯವಾಗಲಿಲ್ಲ ಮತ್ತು ನೀರು ಬಿಡುವಂತಿಲ್ಲ. "ಅಯ್ಯೋ ಪಾಪ ಅವನ ಪಾಡು ನೋಡೋಕಾಗುತ್ತಿರಲಿಲ್ಲ ರೀ" ಎಂದು ಹೇಳಿದ ಕಿಚ್ಚ ನಗಾಡಿದರು. ಲೂಸ್ ಮಾದ ಯೋಗೀಶ್ ನಮ್ಮ ತಂದೆಯವರ ಹುಟ್ಟುಹಬ್ಬ ಶುಭಾಶಯಗಳನ್ನು ತಿಳಿಸಿದನು.

Friday, May 31, 2013

ಬಿಗ್ ಬಾಸ್ May 30





E ಟಿವಿಯಲ್ಲಿ ಬರುವ ಬಿಗ್ ಬಾಸ್ ನಲ್ಲಿ ತುಲಾಬಾರ ಮುಗಿದಿದ್ದು ಮುಂದಿನ ಟಾಸ್ಕ ಕೊಡುವದಕ್ಕೆ ಬಿಗ್ ಬಾಸ್ ಎಲ್ಲ ಸಿದ್ದತೆಯನ್ನು ನಡೆಸಿದ್ದು, ಈ ಟಾಸ್ಕ್ ನ್ನು ಸೈಕಲ್ ಸವಾರಿಯನ್ನು ನಡೆಸುವದಕ್ಕೆ ಬಿಗ್ ಬಾಸ್ ಸದಸ್ಯರಿಗೆ ತಿಳಿಸಿದರು. ಈ ಸೈಕಲ್ ಸವಾರಿಯಲ್ಲಿ ಕೇವಲ ೩ ಜನ ಮಾತ್ರ ಇರುವದಕ್ಕೆ ಹೇಳಿದ್ದರೆ. ಆದರೆ ಈ ಸೈಕಲ್ ಸವಾರಿಯ ಟಾಸ್ಕ್ ನ್ನು ನಮ್ಮ ಬಿಗ್ ಬಾಸ್ ಸದಸ್ಯರಿಗೆ ಸದ್ಯವಗಲ್ಲಿಲ್ಲ.

ಈ ಸೈಕಲ್ ಸವಾರಿಯ ಬದಲು ಬಿಗ್ ಬಾಸ್ ಬೇರೆ ರೀತಿಯ ಟಾಸ್ಕ್ ನ್ನು ಕೊಟ್ಟಿದ್ದಾರೆ. ಮಕ್ಕಳ ಆಟಿಕೆಯ ಗಾಡಿಯನ್ನು ಅಲ್ಲಿರುವ ಸದಸ್ಯರಿಗೆ ಕೊಟ್ಟರು. ಹೊರಗಡೆ ೧೦ ಸುತ್ತ, ಸೂಪಾದಲ್ಲಿ ೧೦ ಸುತ್ತ, ಹೀಗೆ ಕೆಲವೊಂದು ಸುತ್ತುಗಳನ್ನು  ಹಾಕಲು ಹೇಳಿದರು, ಅದೇ ರೀತಿ ಎಲ್ಲ ಸದಸ್ಯರು ಈ ಟಾಸ್ಕ್ ನ್ನು ಚನ್ನಾಗಿ ನಡೆಸಿದರು.

ಈ ಟಾಸ್ಕ್ ಮುಗಿದ ನಟರ ಬಜೆಟನ್ನು ಮಾಡಲು ತಿಳಿಸಿದರು. ಆ ಬಜೆಟನಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರು ಆದುದರಿಂದ ಆ ಬಜೆಟ್ ಕೂಡ ಕೈ ತಪ್ಪಿ ಹೋಯಿತು.