Wednesday, June 5, 2013

big boss june 4



ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋ ನಲ್ಲಿ ಇರುವ ಸದಸ್ಯರನ್ನು ತಮ್ಮ ಮನೆಯವರನ್ನು ನೋಡಿ ಸಂತೋಷದಿಂದ ಆ ದಿನವನ್ನು ಮುಂದಿಡಿದರು.   72ನೇ ದಿನ ಪೂರೈಸಿದ ಬಿಗ್ ಬಾಸ್  ಅಲ್ಲಿರುವ ಸದಸ್ಯರಿಗೆ ಮಾತೊಂದು ವಿಶೇಷವಾದ ಟಾಸ್ಕ್ ನ್ನು ನೀಡಿದರು ಅದುವೇ 'ಕನ್ನಡ ವಸತಿ ಶಾಲೆ'.  ಈ ಕನ್ನಡ ವಸತಿ ಶಾಲೆಯಲ್ಲಿ ಚಂದ್ರಿಕಾ ಇಂಗ್ಲಿಷ್ ಟೀಚರ್, ಅರುಣ್ ಸಾಗರ್ ನಾಟಕ ಹಾಗು ಕಲೆಯ ಟೀಚರ್ ಮತ್ತು ಅನುಶ್ರಿ ಗಣಿತ ಟೀಚರ್ ಆಗಿದ್ದು, ಉಳಿದವರು ವಿದ್ಯಾರ್ಥಿಗಳು.

ಅಷ್ಟೇ ಅಲ್ಲದೆ ಒಬ್ಬ ಟೀಚರ್ ಪಾಠ ಮಾಡಬೇಕಾದರೆ ಉಳಿದವರೆಲ್ಲರೂ ವಿದ್ಯರ್ಥಿಗಳಗಿರಬೇಕು. ಎಲ್ಲರಿಗು ಸ್ಕೂಲ್ ಬ್ಯಾಗ್, ಟಿಫಿನ್ ಬಾಕ್ಸ್, ಟೈ, ಶಾಲಾ ಸಮವಸ್ತ್ರಗಳನ್ನು ಕೊಡಲಾಯಿತು. ಎಲ್ಲರು ತಮ್ಮ ಟಿಫಿನ ಬಾಕ್ಸ, ಶಾಲಾ ಸಮವಸ್ತ್ರಗಳನ್ನೂ, ಸ್ಕೂಲ್ ಬ್ಯಾಗ ಹಾಗು ಟೈ ಯನ್ನು ಹಾಕಿಕೊಂಡರೆ ನಮ್ಮ ಗುರುಗಳು ಮಾತ್ರ ತಮ್ಮ ಕಾವಿ ವಸ್ತ್ರದ ಮೇಲೆ ಟೈ ಯನ್ನು ಹಾಕಿಕೊಂಡರು.

ಎಲ್ಲ ವಿದ್ಯಾರ್ಥಿಗಳು ಶಾಲೆಗೆ ಬಂದರೆ ಟೀಚರ್ ಮಾತ್ರ ಇನ್ನು ಶಾಲೆಗೆ ಬಂದಿಲ್ಲ. ಆಗ ತುಂಟ ಬಾಲಕ ಅರುಣ್ ಕಪ್ಪು ಕಲೆಗೆ ಮೇಲೆ 'ಕುಳ್ಳಿ ಮಿಸ್ ಮಳ್ಳಿ ಮಿಸ್ ಮಂಚಕ್ಕೆಷ್ಟು ಕಾಲು? ' ಬರೆದಿದ್ದನು. ಇದನ್ನು ನೋಡಿದ ಅನುಶ್ರಿ ಟೀಚರ್ ಅದರ ಬಗ್ಗೆ ವಿವರಿಸಿ, ೧ ರಿಂದ ೫ ರವಗೆ ಸಂಖ್ಯೆಗಳನ್ನು ಕಲಿಸಿದಳು.  ಅನುಶ್ರಿ ನಂತರ್ ಅರುಣ್ ಸಾಗರ್ ಕಲೆಯ ಬಗ್ಗೆ ತಿಳಿಸಿ ಚಿತ್ರವನ್ನು ಬಿಡಿಸಲಿಕ್ಕೆ ಎಲ್ಲರನ್ನು ಹೇಳಿ ಬಿಡಿಸಿದರು. ಆಗ ಮಳೆ ಪ್ರಾರಂಬವಾಯಿತು. ಬಿಗ್ ಬಾಸ್ ಮನೆ ಮಳೆ ನೀರಿನಿಂದ ತುಂಬಿ ಹೋಯಿತು.

No comments:

Post a Comment