
ನಾವು ತಿಳಿದಿರುವ ಹಾಗೆ ಯುಟಿವಿ ಬಿಂದಾಸದಲ್ಲಿ ಎಮೋಷನಲ ಅತ್ಯಾಚಾರ 3 ರಲ್ಲಿ ಹುಡಗ ಹುಡಿಗಿಯರ ಸಂಭಂದದ ಬಗ್ಗೆ ಅಂದರೆ ಪ್ರೀತಿ, ಪ್ರೇಮ, ಪ್ರಣಯ ಹಾಗೆ ಜಗಳ ಹೀಗೆ ನಡಿಸಿಕೊಳ್ಳುತ್ತಾರೆ. ಇದನ್ನ ನಡೆಸುವದಕ್ಕೆ ಬಾಲಿವುಡದ ನಾಯಕ ಅಜಯ ದೇವಗನ್ ಹಾಗು ಕ್ರಿಕೆಟ ಪಟು ಯುವರಾಜ ಸಿಂಗ ಇದನ್ನು ನಡಿಸಿದ್ದರು. ಈ ಕಾರ್ಯಕ್ರಮವನ್ನು ನಡೆಸಿಕೊಳ್ಳುವದಕ್ಕೆ ಬರತಾಯಿದ್ದರೆ ಮಂಗಳೂರಿನ ಬೆಡಗಿ ದೀಪಿಕಾ ಪಡಕೊನೆ.
ಈ ರಿಯಾಲಿಟಿ ಶೋದ ಬಗ್ಗೆ ಮಾತನಾಡಿರುವ ದೀಪಿಕಾ, ಇಂದಿನ ಯುವಜನಾಂಗದ ಸಂಬಂಧಗಳಲ್ಲಿ ಸಾಕಷ್ಟು ಏರಿಳಿತಗಳಿವೆ. ಇದೇ ರೀತಿಯ ಸಮಸ್ಯೆಯನ್ನು ಅನುಭವಿಸುವ ಪಾತ್ರವನ್ನು 'ಆರಕ್ಷಣ್' ಚಿತ್ರದಲ್ಲಿ ತಾನು ಪೋಷಿಸಿದ್ದೇನೆ. ನಿಜಕ್ಕೂ ಈ ಪಾತ್ರ ತಮಗೆ ಸವಾಲಿನದ್ದಾಗಿತ್ತು ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ದೀಪಿಕಾ ಜೊತೆಗೆ ಈ ಚಿತ್ರದ ನಿರ್ದೇಶಕ ಪ್ರಕಾಶ್ ಝಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವದರ ಜೊತೆ 'ಆರಕ್ಷಣ್' ಚಿತ್ರದ ಪ್ರಚಾರ ಕೂಡ ನಡೆಯಲಿದೆ. ಅಂದಹಾಗೆ ಆರಕ್ಷಣ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಸೈಫ್ ಆಲಿ ಖಾನ್, ಪ್ರತೀಕ್ ಬಬ್ಬರ್ ಮುಂತಾದವರು ನಟಿಸಿದ್ದಾರೆ.
it is very nice
ReplyDelete