Thursday, May 30, 2013
ಬಿಗ್ ಬಾಸ್ May 29
ಈ ಟಿವಿ ಯಲ್ಲಿ ಬರುವ ಬಿಗ್ ಬಾಸ್ ನಲ್ಲಿ ನೀಡಿದ್ದ ಜಲಸಂರಕ್ಷಣೆ ಟಾಸ್ಕ್ ಮುಗಿದಿದೆ.ಎಲ್ಲರೂ ಅಹರ್ನಿಶಿ ಶ್ರಮಿಸಿ ಕಡೆಗೆ 600 ಪಾಯಿಂಟ್ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಬೇರೆ ತರಹದ ಟಾಸ್ಕ್ ನ್ನು ನೀಡಿದ್ದಾರೆ. ಇನ್ನು 66ನೇ ದಿನವೂ ಶಕ್ತಿಪಥ ಟಾಸ್ಕ್ ಮುಂದುವರಿದಿದೆ.
ಈ ಬಾರಿ 'ಬಿಗ್ ಬಾಸ್ ತುಲಾಭಾರ' ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್ ನಲ್ಲಿ ಗೆದ್ದರೆ 1000 ಪಾಯಿಂಟ್ಸ್ ನೀಡಲಾಗುತ್ತದೆ. ಒಂದು ದೊಡ್ದದಾದ ತಕ್ಕಡಿ ಇರುತ್ತದೆ ಒಂದು ಕಡೆ ಇಬ್ಬರು ಕೂಡಬೇಕು. ಇನ್ನೊಂದು ಕಡೆ ಮನೆಯ ಸದಸ್ಯರ ಪರ್ಸನಲ್ ವಸ್ತುಗಳನ್ನು ಹಾಕಿ ಇಡಬೇಕು. ಆ ತಕ್ಕಡಿಯ ಎರಡೂ ಕಡೆಗೆ ಸಮವಾಗಿರುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನೆಲಕ್ಕೆ ತಾಗಬಾರದು.
ಒಮ್ಮೆ ನೆಲಕ್ಕೆ ತಾಗಿದರೆ 200 ಪಾಯಿಂಟ್ಸ್ ಕಟ್ ಆಗುತ್ತದೆ. ಐದು ಬಾರಿ ತಾಗಿದರೆ ಸಂಪೂರ್ಣ ಪಾಯಿಂಟ್ಸ್ ಕಟ್. ಇನ್ನು ತಾಗಿಸುತ್ತಾ ಹೋದರೆ ಮೈನಸ್ ಆಗುತ್ತಾ ಹೋಗುತ್ತದೆ. ಈ ಟಾಸ್ಕ್ ನಲ್ಲಿ ಮೊದಲು ಅನುಶ್ರೀ ಹಾಗೂ ಲೂಸ್ ಮಾದ ಯೋಗೀಶ್ ತುಂಬಾ ಹೊತ್ತು ಕುಳಿತುಕೊಂಡರು, ಇಬ್ಬರೂ ತುಲಾಭಾರ ಕಾಪಾಡುವಲ್ಲಿ ಯಶಸ್ವಿಯಾಗಿ ಬಿಗ್ ಬಾಸ್ ಪ್ರೀತಿಗೂ ಪಾತ್ರರಾದರು. ನಂತರ್ ಅನುಶ್ರೀ ಹಾಗೂ ಲೂಸ್ ಮಾದ ಯೋಗೀಶ್ ನಿಗೆ ಬಿಗ್ ಬಾಸ್ ಅವರನ್ನು ಕರೆದು ಕೆಲವೊಂದು ವಿಷಯಗಳನ್ನು ಹೇಳಿ ನಂತರ್ ಬೇರೆಯವರಿಗೆ ಕೂಡಲು ಹೇಳಿದರು. ಅದರಂತೆ ಬೇರೆಯವರ ಸರದಿ ನಡೀತಾ ಇದೇ ಮುಂದೆ ಈ ಟಾಸ್ಕ್ ಯಾವ ಹಂತಕ್ಕೆ ಹೋಗುತ್ತದೆ ಎಂದು ಕಾದು ನೋಡೋಣ.
Subscribe to:
Post Comments (Atom)
No comments:
Post a Comment